ಗುಣಮಟ್ಟ ನಿಯಂತ್ರಣ, ಅಥವಾ ಕ್ಯೂಸಿ ಉತ್ಪಾದನೆಯಲ್ಲಿ ಒಳಗೊಂಡಿರುವ ಎಲ್ಲಾ ಅಂಶಗಳ ಗುಣಮಟ್ಟವನ್ನು ಪರಿಶೀಲಿಸುವ ಪ್ರಕ್ರಿಯೆ. ಐಎಸ್ಓ-9000( 9000) ರ ಪ್ರಕಾರ ಗುಣಮಟ್ಟ ನಿಯಂತ್ರಣ "ಗುಣಮಟ್ಟದ ಅಗತ್ಯತೆಗಳನ್ನು ಪೂರೈಸುವಲ್ಲಿ ಕೇಂದ್ರೀಕರಿಸಿದ ಗುಣಮಟ್ಟದ ನಿರ್ವಹಣೆಯ ಒಂದು ಭಾಗ" ಎಂದು ವ್ಯಾಖ್ಯಾನಿಸಲಾಗಿದೆ . ಈ ವಿಧಾನವು ಐಎಸ್ಓ-900೧( 9001)ರ ಮಾನದಂಡದ ಪ್ರಕಾರ ಮೂರು ಅಂಶಗಳ ಮೇಲೆ ಒತ್ತು ನೀಡುತ್ತದೆ. ನಿಯಂತ್ರಣ, ಉದ್ಯೋಗ ನಿರ್ವಹಣೆ, ವ್ಯಾಖ್ಯಾನಿತ ಮತ್ತು ಉತ್ತಮವಾಗಿ ನಿರ್ವಹಿಸಿದ ಕಾರ್ಯವಿಧಾನ, ಕಾರ್ಯಕ್ಷಮತೆ ಮತ್ತು ಸಮಗ್ರತೆ ಮಾನದಂಡಗಳು, ಮತ್ತು ದಾಖಲೆಗಳ ಗುರುತಿಸುವಿಕೆ ಜ್ಞಾನ, ಕೌಶಲಗಳು, ಅನುಭವ ಮತ್ತು ವಿದ್ಯಾರ್ಹತೆಗಳಂತಹ ಸ್ಪರ್ಧಾತ್ಮಕತೆ ಸಿಬ್ಬಂದಿ, ಸಮಗ್ರತೆ, ಆತ್ಮವಿಶ್ವಾಸ, ಸಾಂಸ್ಥಿಕ ಸಂಸ್ಕೃತಿ, ಪ್ರೇರಣೆ, ತಂಡದ ಸ್ಫೂರ್ತಿ ಮತ್ತು ಗುಣಮಟ್ಟದ ಸಂಬಂಧಗಳಂತಹ ಅಂಶಗಳು.ಈ ಮೂರು ಅಂಶಗಳಲ್ಲಿ ಯಾವುದೇ ರೀತಿಯಲ್ಲಿ ಕೊರತೆಯಿದ್ದರೆ ಉತ್ಪನ್ನಗಳ ಗುಣಮಟ್ಟ ಅಪಾಯದಲ್ಲಿರುತ್ತದೆ. ಗುಣಮಟ್ಟ ನಿಯಂತ್ರಣದ ಒಂದು ಪ್ರಮುಖ ಅಂಶವೆಂದರೆ ತಪಾಸಣೆ ಇಲ್ಲಿ ಭೌತಿಕ ಉತ್ಪನ್ನವನ್ನು ವಿವಿಧ ಉಪಕರಣಗಳನ್ನು ಉಪಯೋಗಿಸಿ ಪರೀಕ್ಷಿಸಲಾಗುತ್ತದೆ (ಅಥವಾ ಸೇವೆಯ ಅಂತಿಮ ಫಲಿತಾಂಶಗಳನ್ನು ವಿಶ್ಲೇಷಿಸಲಾಗುತ್ತದೆ).ಗುಣಮಟ್ಟ ನಿಯಂತ್ರಣಕ್ಕೆ ಸ್ವೀಕಾರಾರ್ಹ ಉತ್ಪನ್ನ ಮತ್ತು ದೋಷಗಳ ಪಟ್ಟಿಗಳ ಮತ್ತು ವಿವರಣೆಯೊಂದಿಗೆ ಗುಣಮಟ್ಟ ನಿಯಂತ್ರಕರಿಗೆ ಒದಗಿಸಲಾಗುತ್ತದೆ. ಉದಾಹರಣೆಗಾಗಿ ಬಿರುಕುಗಳು ಅಥವಾ ಮೇಲ್ಮೈ ಕಳಂಕಗಳು ಇತ್ಯಾದಿ. == ಇತಿಹಾಸ == ಆರಂಭಿಕ ಕಲ್ಲಿನ ಉಪಕರಣಗಳು ಯಾವುದೇ ರಂಧ್ರಗಳನ್ನು ಹೊಂದಿರಲಿಲ್ಲ ಮತ್ತು ಪರಸ್ಪರ ಬದಲಾಯಿಸಬಹುದಾದ ಭಾಗಗಳಾಗಿ ವಿನ್ಯಾಸಗೊಳಿಸಲ್ಪಟ್ಟಿರಲಿಲ್ಲ.ನಂತರ ಸಾಮೂಹಿಕ ಉತ್ಪಾದನೆಯು ಒಂದೇ ಆಯಾಮದ ಮತ್ತು ವಿನ್ಯಾಸದೊಂದಿಗೆ ಭಾಗಗಳನ್ನು ಮತ್ತು ವ್ಯವಸ್ಥೆಯ ರಚನೆಗೆ ಪ್ರಕ್ರಿಯೆಗಳನ್ನು ಸ್ಥಾಪಿಸಿದವು,ಆದರೆ ಈ ಪ್ರಕ್ರಿಯೆಗಳು ಏಕರೂಪವಾಗಿರುವುದಿಲ್ಲ ಮತ್ತು ಹೀಗಾಗಿ ಕೆಲವು ಗ್ರಾಹಕರು ಅತೃಪ್ತರಾಗಿದ್ದರು.ನಂತರ ಗುಣಮಟ್ಟ ನಿಯಂತ್ರಣವು ಪರೀಕ್ಷಾ ಉತ್ಪನ್ನಗಳ ಕಾರ್ಯವನ್ನು ಪ್ರತ್ಯೇಕಿಸಿ ,ಉತ್ಪನ್ನ ಬಿಡುಗಡೆಯನ್ನು ಅನುಮತಿಸುವ ಅಥವಾ ನಿರಾಕರಿಸುವ ನಿರ್ಧಾರದಿಂದ ದೋಷಗಳನ್ನು ಬಹಿರಂಗಪಡಿಸಲು ಹೊಸ ಪ್ರಕ್ರಿಯೆ ಆರಂಭಿಸಲಾಯಿತು. ಗುತ್ತಿಗೆ ಕೆಲಸಕ್ಕಾಗಿ, ವಿಶೇಷವಾಗಿ ಸರ್ಕಾರಿ ಏಜೆನ್ಸಿಗಳು ನೀಡುವ ಕೆಲಸ, ಒಪ್ಪಂದ ನಿಯಂತ್ರಣವನ್ನು ನವೀಕರಿಸದೇ ಇರುವ ಪ್ರಮುಖ ಕಾರಣಗಳಲ್ಲಿ ಗುಣಮಟ್ಟದ ನಿಯಂತ್ರಣ ಸಮಸ್ಯೆಗಳು ಸೇರಿವೆ ಆರಂಭದಲ್ಲಿ ಗುಣಮಟ್ಟದ ನಿಯಂತ್ರಣದ ಸರಳ ರೂಪವು ಅಪೇಕ್ಷಿತ ವಸ್ತುವಿನ ರೇಖಾಚಿತ್ರ ಆಗಿತ್ತು.ರೇಖಾಚಿತ್ರ ವಸ್ತುವಿನ ಜೊತೆ ಹೊಂದಿಕೆಯಾಗದಿದ್ದಲ್ಲಿ, ಸರಳವಾಗಿ ಅಂಗೀಕರಿಸು, ಅಥವಾ ನಿರಾಕರಿಸಲಾಹಗುತಿತ್ತು.ಆದಾಗ್ಯೂ, ತಯಾರಕರು ಶೀಘ್ರದಲ್ಲೇ ಭಾಗಗಳು ತಮ್ಮ ಚಿತ್ರಣವನ್ನು ನಿಖರವಾಗಿ ಮಾಡಲು ಕಷ್ಟಕರ ಮತ್ತು ದುಬಾರಿ ಎಂದು ಅರಿವಾಯಿತು.ಹಾಗಾಗಿ 1840 ರ ಸುಮಾರಿಗೆ ಒಪ್ಪುವಬೇರ್ಮೆಚ() ಮಿತಿಗಳನ್ನು ಪರಿಚಯಿಸಲಾಯಿತು, ಇದರಲ್ಲಿ ಅದರ ಭಾಗಗಳು ಮಿತಿಯೊಳಗೆ ಅಳತೆಮಾಡಿದರೆ ವಿನ್ಯಾಸವು ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಪ್ಲಗ್ ಗೇಜ್ಗಳು ಮತ್ತು ರಿಂಗ್ ಗೇಜ್ಗಳಂತಹ ಸಾಧನಗಳನ್ನು ಬಳಸಿಕೊಂಡು ಗುಣಮಟ್ಟವನ್ನು ನಿಖರವಾಗಿ ವ್ಯಾಖ್ಯಾನಿಸಲಾಯಿತು.ಆದಾಗ್ಯೂ,ಇದು ದೋಷದ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ.ಇದು ದೋಷಯುಕ್ತ ವಸ್ತುಗಳ ಸಮಸ್ಯೆಯನ್ನು ಪರಿಹರಿಸಲಿಲ್ಲ; ತ್ಯಾಜ್ಯವನ್ನು ಮರುಬಳಕೆ ಮಾಡುವುದು ಅಥವಾ ಹೊರಹಾಕುವಿಕೆಯು ಉತ್ಪಾದನೆಯ ವೆಚ್ಚಕ್ಕೆ ಸೇರಿಸುತ್ತದೆ,ಗುಣಮಟ್ಟದ ನಿಯಂತ್ರಣ ಸಮಸ್ಯೆಗಳಿಗೆ ಪ್ರಾಶಸ್ತ್ಯ ನೀಡಲು ಮತ್ತು ಅವುಗಳ ಬಗ್ಗೆ ತಿಳಿಸದೆ ಬಿಡಬೇಕೇ ಅಥವಾ ಉತ್ಪಾದನೆಯ ಸುಧಾರಣೆ ಮತ್ತು ಸ್ಥಿರೀಕರಣ ಮಾಡಲು ಗುಣಮಟ್ಟದ ಭರವಸೆ ತಂತ್ರಗಳನ್ನು ಬಳಸಲು ಹಲವಾರು ವಿಧಾನಗಳನ್ನು ಪ್ರಸ್ತಾಪಿಸಲಾಗಿದೆ. == ಗಮನಾರ್ಹವಾದ ವಿಧಾನಗಳು == ಗುಣಮಟ್ಟದ ನಿಯಂತ್ರಣಕ್ಕೆ ತಮ್ಮದೇ ಆದ ವಿಶಿಷ್ಟ ವಿಧಾನಗಳನ್ನು ಹೆಸರಿಸಲು ಪ್ರತ್ಯೇಕ ಸಲಹೆಗಾರರು ಮತ್ತು ಸಂಸ್ಥೆಗಳಿಗೆ ಪ್ರವೃತ್ತಿ ಇದೆ - ಇವುಗಳಲ್ಲಿ ಕೆಲವು ವ್ಯಾಪಕ ಬಳಕೆಯಲ್ಲಿ ಕೊನೆಗೊಂಡಿದೆ. == ಉಲ್ಲೇಖಗಳು ==